MEMORABLE DAYS IN GERMANY



                                                MEMORABLE DAYS IN  BERLIN 


ಜರ್ಮನಿಯ‌ ರಾಜಧಾನಿ ಬರ್ಲಿನ್ . ಅಲ್ಲಿ ತಮ್ಮ ಬದುಕಿನ ಸುಮಧುರ ಕ್ಷಣಗಳನ್ನು ಕಳೆಯುತ್ತಿರುವ ಮಗಸೊಸೆ ನನ್ನನ್ನು ಇಲ್ಲಿಗೆ ಆಹ್ವಾನಿಸಿ, ಇಲ್ಲಿಯ ಸುಂದರ ಪ್ರಕೃತಿಯನ್ನು ತೋರಿಸಬೇಕೆನ್ನುವ ಅವರ ಅಭಿಲಾಷೆಯಂತೆ, ದಿನಾಂಕ 02.06.2023ರಂದು ಇಲ್ಲಿಗೆ ಪಯಣಿಸಿದೆ.

ದೇವರ ದಯೆಯಿಂದ ಪ್ರಯಾಣವು ಸುಖಕರವಾಗಿದ್ದು ಮಗಸೊಸೆಯ  ಸ್ವಾಗತದೊಂದಿಗೆ ಅವರ ಮನೆಗೆ ತಲುಪಿದೆ.
ಪ್ರಯಾಣದ ದಣಿವು ಅವರ ಉಪಚಾರದಲ್ಲಿ ಮರೆತೇಹೋಗಿತ್ತು.


ವಿಶಾಲವಾದ ಮನೆ, ಸದ್ದುಗದ್ದಲ ವಿಲ್ಲದ ವಾತಾವರಣ, ರುಚಿ ಶುಚಿಯಾದ ಊಟ, ಹಸಿರ ಸಿರಿಯ ಮಡಿಲಲ್ಲಿ ಸಂಜೆಯ ಓಡಾಟ, ಅಲ್ಲಲ್ಲಿ ಕಾಣಸಿಗುವ ವಿದೇಶಿಯರು , ಹೀಗೆ ವಾರ ಕಳೆದದ್ದೇ ಗೊತ್ತಾಗಲಿಲ್ಲ.

ಹೀಗೆ ಒಂದು ವಾರವನ್ನು ಕಳೆಯಲಾಗಿ ಇಲ್ಲೇ ನೂರೈವತ್ತು ಕಿ.ಮೀ. ದೂರದಲ್ಲಿರುವ ಮಗಳು, ಅಳಿಯ ಮೊಮ್ಮಗನ ಆಗಮನ.

Welcome at Railway station 
         
ಆ ದಿನ  ಉಭಯ ಕುಶಲೋಪರಿ ಮಾತುಕತೆಯಲ್ಲಿ ರಾತ್ರಿ ಕಳೆದದ್ದೇ ಗೊತ್ತಾಗಲಿಲ್ಲ. ಎಲ್ಲರೂ ಸೇರಿ ಮರುದಿನ ಬರ್ಲಿನ್ ಸಿಟಿಯನ್ನು ನೋಡಲು ಹೋದೆವು. 
ಇಲ್ಲಿಯ ಸಾರ್ವಜನಿಕ ಸಂಪರ್ಕ ವ್ಯವಸ್ಥೆನ್ನು ಮೆಚ್ಚಲೇ ಬೇಕು. ಸುಸಜ್ಜಿತವಾದ ಟ್ರೈನುಗಳು. ಹತ್ತು ಹನ್ನೆರಡು ನಿಮಿಷದ ಅಂತರದಲ್ಲಿ ಅದರ  ಓಡಾಟ. ಓಡಿಹೋಗಿ ಸೀಟು ಹಿಡಿಯುವ‌ ಜಂಜಾಟವಿಲ್ಲ . ಸ್ವಲ್ಪ ಸೀಟು ಬಿಟ್ಟು ಕೊಡ್ತೀರಾ ಎಂದು   ಕೇಳುವ ಸ್ಥಿತಿ ಬರುವುದಿಲ್ಲ.  ನಿಂತು ಪ್ರಯಾಣಿಸಬೇಕಾದ ಸಂದರ್ಭ ಬರುವುದು ಅತಿ ವಿರಳ‌. ಹಾಯಾಗಿ ಕುಳಿತು ಪಯಣಿಸಿ ನಮ್ಮ ಸ್ಥಳವನ್ನು ತಲುಪಬಹುದು.  

 ದಿನಾಂಕ 10.06.2023ರಂದು ಅರ್ಧಗಂಟೆ ರೈಲು ಪ್ರಯಾಣ ಮಾಡಿ ಬರ್ಲಿನ್ ನಗರ ತಲುಪಿದೆವು.  ವಿಶಾಲವಾದ ರಸ್ತೆ. ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮೊದಲು ಸಿಟಿ ಸೆಂಟರ್ ಮಾಲುಗಳಿಗೆ ಹೋದೆವು. ಅಲ್ಲೊಂದು ಇಲ್ಲೊಂದು ವಿಂಡೋ ಶಾಪಿಂಗ್. ನಂತರ ಟಿವಿ ಟವರ್, ಫೌಂಟನ್,  ಕೆಲವು ಮುಖ್ಯವಾದ ಸ್ಥಳಗಳಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಅಂದಿನ ವೀಕ್ಷಣೆಯನ್ನು ಮುಗಿಸಿ, ಹಿಂದಿರುಗಿದೆವು 

ಮರುದಿನ ವೀಕ್ಷಿಸಿದ ಟಿ.ವಿ.ಟವರ್ ಹಾಗೂ   ಸುಂದರ  ಹೂದೋಟಗಳು, ನಮ್ಮ ಲಾಲ್ ಭಾಗ್ ಕಬ್ಬನ್ ಫಾರ್ಕನ್ನು ನೆನಪಿಸುತ್ತಿತ್ತು.

👆       TV Tower, Berlin
          
Queen Victoria Statue at entrance of the park

ಮರುದಿನ ಮತ್ತೆ ಬರ್ಲಿನ್ ನಗರ ವೀಕ್ಷಣೆ. ಅಲ್ಲಿ ಇಲ್ಲಿ ಸುತ್ತಾಟ. ಅಲ್ಲೇ‌ ಇರುವ ದಕ್ಷಿಣ ಭಾರತೀಯ  ಶರವಣ ಭವನದಲ್ಲಿ ಮಧ್ಯಾಹ್ನದ  ಊಟ ಮುಗಿಸಿ, ಹತ್ತರದಲ್ಲಿರುವ ಮುಖ್ಯವಾದ ಸ್ಥಳಗಳನ್ನು ನೋಡಲು ಪ್ರಾರಂಭಿಸಿದೆವು. ನಮ್ಮ ಬೆಂಗಳೂರಿನ ಎಂಜಿ ರೋಡ್ ನಂತೆ  ಕಾಣುವ ನಗರದ ಮುಖ್ಯ ಭಾಗಕ್ಕೆ ಹೋದೆವು. ಜರ್ಮನಿಯ ಆಡಳಿತ ನಡೆಸುವ ಸರ್ಕಾರಿ ಕಟ್ಟಡ, ಜರ್ಮನರ ವಿಕ್ಟರಿ ಟವರ್, Jewish ಮೆಮೋರಿಯಲ್ ಹಾಲ್ ಮುಂತಾದವುಗಳನ್ನು ನೋಡಿದೆವು.

Jewish memorial
         
 ಜ್ಯೂಯಿಸ್ ಮೆಮೋರಿಯಲ್ ನಲ್ಲಿ ಧರ್ಮಾಂಧತೆಯಿಂದ ಅನ್ಯಾಯವಾಗಿ, ಅತೀ ಕ್ರೂರವಾಗಿ ಮಕ್ಕಳು, ಗರ್ಭಿಣಿ  ಹೆಣ್ಣುಮಕ್ಕಳನ್ನು , ಮಕ್ಕಳ ಎದುರಿಗೇ ತಂದೆತಾಯಂದಿರನ್ನು, ತಂದೆತಾಯಿಯರ ಎದುರಿಗೇ ಮಕ್ಕಳ ಪ್ರಾಣ ತೆಗೆದ ಕ್ರೂರತ್ವವನ್ನೊಳಗೊಂಡ ಅವರ ಇತಿಹಾಸದ ಕೆಲವು ತುಣುಕುಗಳನ್ನು ಓದಿದಾಗ  ಮನಸ್ಸು  ಮುದುಡಿ ಭಾರವಾಯಿತು.

ನಂತರ ಬರ್ಲಿನ್ ವಾಲ್, ಝೂ, ಮುಂತಾದುವುದನ್ನು ವೀಕ್ಷಿಸಲು ಹೊರಟೆವು. ಎರಡು ಸರ್ಕಾರಗಳು ಹಿಂದೆ ಬರ್ಲಿನನ್ನು ಇಬ್ಬಾಗ ಮಾಡಿ ಆಡಳಿತ ನಡೆಸಿದ ಕುರುಹಾಗಿ ಆ ಗೋಡೆಯನ್ನು ನಿರ್ಮಾಣ ಮಾಡಿದ್ದು, ಆ ಗೋಡೆಯ ಮೇಲೆ ಅಲ್ಲಿಯ  ಪ್ರಸಿದ್ಧ  ಕಲಾಕಾರರ ಕುಂಚದ ಸೊಬಗನ್ನು    ನಾವು ನೋಡಬಹುದು.ಅಲ್ಲಿ ಕೆಲವು ಫೋಟೋಗಳನ್ನು ಕ್ಲಿಕ್ಕಿಸಿಕೊಂಡು, ಮತ್ತೆ ಇಂಡಿಯನ್ ಹೊಟೆಲ್ ಹುಡುಕಿ, ಊಟ ಮುಗಿಸಿ ಝೂ ಮತ್ತು ಅಕ್ವೇರಿಯಂ ನೋಡಲು ಹೊರಟೆವು. ಸಮಯದ ಅಭಾವದಿಂದ ನಮಗೆ ಪೂರ್ತಿ ನೋಡಲು ಅವಕಾಶ ವಾಗಲಿಲ್ಲ. ಅಲ್ಲಿ ಒಂದೆರಡು ಫೋಟೋ ತೆಗೆದುಕೊಂಡು, ಮನೆಗೆ ಹಿಂದಿರುಗಿದೆವು.



👆 Memories at Berlin wall, Berlin
 

Berlin zoo gate
                  
Brandenberg gate
              
      
Victory column
               
ಹೀಗೆ ಇನ್ನೊಂದು ದಿನ ಬರ್ಲಿನ್ನಿನಲ್ಲಿ ಕ್ರೂಸ್ನಲ್ಲಿ ವಿಹಾರ ಮಾಡಿ ಅಲ್ಲಿಯ ಪ್ರಮುಖ ಕಟ್ಟಡಗಳು, ಅಂದರೆ ಮ್ಯೂಸಿಯಂ, ಚರ್ಚಗಳು, ಆಡಳಿತ ಭವನ, ಪಾರ್ಕ್ ಮುಂತಾದುವುಗಳನ್ನು ನೋಡಿದೆವು.


ಪಕ್ಕದಲ್ಲೇ ಹರಿಯುವ  ನದಿಯಲ್ಲಿ ಕ್ರೂಸ್ನಲ್ಲಿ  ವಿಹಾರಕ್ಕೆ ಬಂದ ಪಯಣಿಗರ ಐಷಾರಾಮಿ ವಿಹಾರ, ನಮ್ಮ ಹಾಗೆ ವಿಹರಿಸಲು ಬಂದ ಪ್ರಯಾಣಿಕರ ಓಡಾಟ, ಹೀಗೆ ಅಲ್ಲಿಯ ಜನಜೀವನದ ಸ್ವಲ್ಪ ಭಾಗವನ್ನು ನೋಡಿ, ಹತ್ತಿರದಲ್ಲಿರುವ ಇಂಡಿಯನ್ ಹೋಟೆಲ್ಲಿನಲ್ಲಿ ಸವಿಯೂಟ ಸವಿದು   ಹಿಂದಿರುಗಿದೆವು.


ಬರ್ಲಿನ್ನಿನಲ್ಲಿ ವಾಯುವಿಹಾರದ ಕ್ಷಣಗಳು.




ಮಗಳ ಮನೆಯಲ್ಲಿ ಕಳೆದ ಸಂತೋಷದ ದಿನಗಳು.

ಬರ್ಲಿನ್ನಿನಲ್ಲಿ ಸ್ವಲ್ಪ ದಿನಗಳನ್ನು ಕಳೆದು, ಮಗಳ ಜೊತೆಗೆ ಯುರೋಪ್ ಟ್ರಿಪ್ ಮಾಡಿ ಮಗಳ ಮನೆಗೆ ಬಂದು ಸುಮಾರು ಒಂದು ತಿಂಗಳಿಗೂ‌ ಹೆಚ್ಚು ದಿನಗಳನ್ನು ಕಳೆದದ್ದೇ ಗೊತ್ತಾಗಲಿಲ್ಲ.
ಇಲ್ಲಿ ಮೊಮ್ಮಗನ ಜೊತೆ ನಾವೆಲ್ಲಾ ಕಳೆದ ದಿನಗಳು, ಸಂಜೆಯ ವಾಯು ವಿಹಾರ ಎಲ್ಲವೂ ನನಗೆ ಅವಿಸ್ಮರಣೀಯ. 

ನಮ್ಮ ಪುಟ್ಟು ಎಷ್ಟೋ ದಿನಗಳು ನನಗೆ ಹಾಸಿಗೆ ರೆಡಿ ಮಾಡುವುದು, ನೀರು ತಂದು ಕೊಡುವುದು, ತಾನು ತಿನ್ನುವಾಗ ನನಗೂ ಚಾಕಲೇಟ್ ಮುಂತಾದವುಗಳನ್ನು ಕೊಡುವುದು ಹೀಗೆ ಸ್ಪೆಷಲ್ ಉಪಚಾರವನ್ನು ಮಾಡಿ, ಈಗ ಅವನನ್ನು ಹಾಗೂ ಪ್ರೀತಿಯಿಂದ ನೋಡಿಕೊಂಡ ಅಶ್ವಿನಿ ಸುಧೀಂದ್ರರನ್ನು ಬಿಟ್ಟು ಹಿಂದಿರುಗುವುದು ಮನಸ್ಸಿಗೆ ಹೃದಯಕ್ಕೆ ಭಾರ ಎನ್ನಿಸುತ್ತಿದೆ. ಅವರೂ ಕೂಡ ತಮ್ಮ ಕೆಲಸದ ಮಧ್ಯದಲ್ಲಿ ನನಗಾಗಿ ಟೈಂ ಮಾಡಿಕೊಂಡು ಇಲ್ಲಿಯ ಹತ್ತಿರದ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಿದ್ದು ಮರೆಯಲಾಗದ ದಿನಗಳು.
 
ಆ ಸ್ಥಳಗಳ ಪಕ್ಷಿನೋಟವನ್ನು ಹಂಚಿಕೊಳ್ಳ ಬಯಸುವೆ.

ಮ್ಯೂನಿಕ್:
 ನಾವು ಅವರಿದ್ದ ಸ್ಥಳ ಎರ್ಲಾಂಗನ್ನಿಂದ ಒಂದು ಶನಿವಾರ ಆಸ್ಟ್ರಿಯಾದ Salzburg ನೋಡಲು ಹೊರಟೆವು. Nuremberg  ಮೂಲಕ ಮ್ಯೂನಿಕ್ ತಲುಪಿದೆವು. ಅಲ್ಲಿಂದ ಮೆಟ್ರೋ ದಲ್ಲಿ ಮಿಸ್ಸೆಸ್ಟಡ್ ಏರಿಯಾದ H2 ಹೋಟೆಲ್ ಗೆ ಹೋಗಿ ಅಲ್ಲಿ ಉಳಿದೆವು.

Munich underground Metro station (U-Bahn)


Munich H2 Hotel

ಮ್ಯೂನಿಕ್ ಜರ್ಮನಿಯ ಪ್ರಸಿದ್ಧ ನಗರ. ಇಲ್ಲಿಯ ಮೆಟ್ರೋ ಮತ್ತು ಲೋಕಲ್ ಸಾರ್ವಜನಿಕ ಸಂಪರ್ಕ ವ್ಯವಸ್ಥೆ ತುಂಬಾ ಚೆನ್ನಾಗಿದೆ. ಸ್ವಲ್ಪ ರೆಸ್ಟ್ ತೆಗೆದುಕೊಂಡು ಮ್ಯುನಿಕ್ ಸಿಟಿ ಸೆಂಟರ್ ನೋಡಲು ಹೋದೆವು. ಅಲ್ಲಿ ಮುಖ್ಯವಾಗಿ ಮೇರಿಯನ್ ಪ್ಲಾಸಾ ನೋಡಿದ ಮೇಲೆ ಆಲ್ಲಿಯ ಮಾರ್ಕೇಟ್ ನೋಡಲು ಹೊರಟೆವು. ಅಲ್ಲಿ ಸ್ವಲ್ಪ ಕಾಲ ಕಳೆದು, ಐಸ್ಕ್ರೀಮ್ ಸವಿದು ಪುನಃ ಹೊಟೆಲ್ ಗೆ ಬಂದು ಉಳಿದೆವು. ಮರುದಿನ ಬೆಳಗ್ಗೆ ಪ್ರವಾಸಿ ತಾಣ Salzburg ಗೆ ರೈಲಿನಲ್ಲಿ ಪಯಣಿಸಿದೆವು. ಅಲ್ಲಿಯ ಕೆಲವು ಪ್ರೇಕ್ಷಣಿಯ ಸ್ಥಳಗಳನ್ನು ನೋಡಿದೆವು.

        👆  Marienplatz, Munich  

           Shopping centre, Munich 

   SALZBURG 
ಮೊದಲು Salzburg ನ. Hohen fort ನ್ನು ನೋಡಲು ಹೋದೆವು. ಇದು ಸುಮಾರು 800 ವರ್ಷಗಳ ಹಿಂದೆ ಪ್ರಸಿದ್ದ ರಾಜ ಮನೆತನದವರು ಆಳ್ವಿಕೆ ನಡೆಸಿರುವ ಇತಿಹಾಸವಿರುವ ಕೋಟೆಯಾಗಿದ್ದು, ಹಿಂದಿನ ಎಲ್ಲಾ ರಾಜರುಗಳಂತೆ ಇವರೂ ಕೂಡ ತಮ್ಮನ್ನು ಶತ್ರುಗಳಿಂದ ರಕ್ಷಿಸಿಕೊಳ್ಳಲು ಈ ಕೋಟೆಯನ್ನು ನಿರ್ಮಿಸಿ ಕೊಂಡಿರುವುದು ಕಂಡು ಬರುತ್ತದೆ.
ಮೊದಲು ಕೆಳಗಡೆ ಮುಂಬಾಗದ ವಿಶಾಲವಾದ ಅಂಗಳದಲ್ಲಿರುವ Sound of Music ಫೌಂಟನ್ ವೀಕ್ಷಿಸಿ, ಅಲ್ಲಿ ಕೆಲವು ಫೋಟೋಗಳನ್ನು ತೆಗೆದುಕೊಂಡು ಮುಂದುವರಿದೆವು. 
         Hohen fort base

         Sound of music fountain

ಹೊಹೆನ್ ಫೋರ್ಟ ಮೇಲೆ ಹೇಳಿದ ಹಾಗೆ ತುಂಬಾ ಎತ್ತರದಲ್ಲಿ ಇದ್ದು ಅದನ್ನು ಹತ್ತಿ ಹೋಗುವುದು ಕಷ್ಟಸಾಧ್ಯವಾಗಿರುವುದರಿಂದ ನಾವು ಎಂಟ್ರಿ ಟಿಕೇಟು ತೆಗೆದುಕೊಂಡು ಕೇಬಲ್ ಕಾರಿನಲ್ಲಿ ಎತ್ತರವಾದ ಕೋಟೆಯನ್ನು ಏರಿದೆವು. ಸುಡುವ ಬಿಸಿಲಿನಲ್ಲಿಯೂ ಎತ್ತರದಿಂದ ಬೀಸುವ ತಣ್ಣನೆಯ ಗಾಳಿ ಸ್ವಲ್ಪ ಮಟ್ಟಿಗೆ ಹಿತವನ್ನು ನೀಡುತ್ತೆ. ಅಲ್ಲಿಂದ ಇಡೀ ನಗರದ ನೋಟ ಒಂದು ಸುಂದರ ಅನುಭವ.


   View from the top of Hohen fort .

ಅಲ್ಲಿ ಒಳಗಡೆ ಅದರ ಪುರಾತನ ಇತಿಹಾಸದ ವಿವರಗಳಿರುವ ಮಾದರಿಗಳನ್ನು ನೋಡಿದೆವು.ಆ ಫೋರ್ಟಿನ ಒಳಗಡೆ ತುಂಬಾ ಅಂತಸ್ತುಗಳಿದ್ದು, ಕಿರಿದಾದ ಜಾಗದಲ್ಲಿ ಮೇಲೆ ಹತ್ತುವುದು ಪ್ರಯಾಸದ ಕೆಲಸ. ಅಲ್ಲಿ ಮದ್ದು ಗುಂಡುಗಳನ್ನು ಇಡುವ ಜಾಗ, ದೂರದಲ್ಲಿ ನಡೆಯುವ ಎಲ್ಲವನ್ನೂ ವೀಕ್ಷಿಸಲು ದೊಡ್ಡ ದೊಡ್ಡ ವೀಕ್ಷಣಾ ಸಾಧನಗಳನ್ನು ಇಟ್ಟಿದ್ದನ್ನು ಈಗಲೂ ನೋಡಬಹುದು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಅಲ್ಲಿ ರಾಜರ ಆಳ್ವಿಕೆಗೆ ಸಂಬಂದಿಸಿದ ಎಲ್ಲಾ ವಿವರಗಳು ದೊರೆಯುತ್ತವೆ.

ಆ ಎತ್ತರದ ಕೋಟೆ ಯಿಂದ ಸ್ಯಾಲಿಸ್ ಬರ್ಗ್ ನಗರದ ಸುಂದರ ಪಕ್ಷಿನೋಟವನ್ನು ವೀಕ್ಷಿಸಿ, ಫೋಟೋಗಳನ್ನು ತೆಗೆದುಕೊಂಡು ಅಲ್ಲಿಂದ ಕೆಳಗೆ ಕೇಬಲ್ ಕಾರಿನಲ್ಲಿ ಕೆಳಗೆಷ ಬಂದೆವು. ಕೆಳಗಿರುವ ಚರ್ಚಿನ ಸುಂದರ ಹೊರನೋಟವನ್ನು ನೋಡಿ ಮುಂದೆ ಸಾಗಿದೆವು.

                       Church 

ಅಲ್ಲಿಂದ ಹತ್ತಿರದಲ್ಲಿರುವ ಪ್ರಸಿದ್ದ Mirabell Palace and Garden ನೋಡಲು ಹೋದೆವು. ಇದು ಒಂದು ಸುಂದರ ಹೂದೋಟವಾಗಿದ್ದು, ಸುಂದರವಾಗಿ ನಿರ್ವ ಹಿಸಿರುವುದು ಕಂಡು ಬರುತ್ತದೆ . ಅಲ್ಲಿ ಸ್ವಲ್ಪ ಹೊತ್ತು ಸುತ್ತಾಡಿ , ಫೋಟೋ ತೆಗೆಸಿಕೊಂಡು,ವಿಶ್ರಾಂತಿ ಪಡೆದೆವು.ಈ ಪ್ರಾರಾಂಗಣದಲ್ಲಿರುವ ಅರಮನೆ, ಭವನಗಳು, ಹಿಂದೆ ರಾಜಮಹಾರಾಜರುಗಳು ತಮ್ಮ ವೈಭವದ ಜೀವನವನ್ನು ನಡೆಸಿದ್ದು , ಅದರ ವಿವರಗಳನ್ನು ನಾವು ತಿಳಿಯಬಹುದು. ಅಲ್ಲಿಯ ಪ್ರಸಿದ್ಧ ರಾಜರುಗಳ ವಿವಾಹಗಳು ನಡೆಯುತ್ತಿದ್ದ ಸಭಾಭವನಗಳಿದ್ದು, ಈಗಲೂ ಇಲ್ಲಿ ಐಷಾರಾಮಿ ಶ್ರೀಮಂತರ ಮದುವೆಯು ನಡೆಯುವುದೆಂಬ ಮಾಹಿತಿ ತಿಳಿದೆವು. 

                   Mirabell Palace

    👆   Mirabell garden and Palace

ಅಲ್ಲೇ ಹತ್ತಿರದಲ್ಲಿರುವ Mozart ಎಂಬ 18ನೇ ಶತಮಾನದ ಪ್ರಸಿದ್ಧ ಮ್ಯುಸೀಸಿಯನ್ ಇದ್ದ ಮನೆಯ ಪಕ್ಷಿನೋಟವನ್ನು, ಅವನು ತಾನು ಬದುಕಿದ ಕೇವಲ 35 ವರ್ಷದಲ್ಲಿ ಸಾಧಿಸಿದ ಸಾಧನೆಯನ್ನೊಳಗೊಂತೆ ಎಲ್ಲಾ ವಿವರಗಳನ್ನು ಅಲ್ಲಿ ನೋಡಬಹುದು.


ಹತ್ತಿರದಲ್ಲಿರುವ lock bridgeನ್ನು ನೋಡಿದೆವು . ಇದರ ವಿಶೇಷವೆಂದರೆ , ಇಲ್ಲಿಗೆ ಭೇಟಿ ನೀಡಿದ ರಸಿಕರು ತಮ್ಮ ಪ್ರೀತಿಯ ಕುರುಹಿಗಾಗಿ ಹಾಗು ತಾವು ಎಂದೆಂದಿಗೂ ಪ್ರೀತಿಯ ಬಂಧನದಲ್ಲಿಯೇ ಇರಬೇಕೆಂಬ ಬಯಕೆಯಿಂದ ಒಂದು ಲಾಕನ್ನು(ಬೀಗ) ಆ bridge ನ ಕಬ್ಬಿಣದ ಮೆಶ್ಶಿಗೆ ಕಟ್ಟಿ ಹೋಗುವರು. ಅದು ಈಗ ಎಣಿಸಲಾರದಷ್ಟಾಗಿದೆ. ಇದನ್ನು ನೋಡಿ, ನಂತರ ಬಿಸಿಲಿನ ತಾಪದಿಂದ ಸ್ವಲ್ಪ ಹಿತ ಪಡೆಯಲು ಅಲ್ಲಿಯೇ ಪಕ್ಕದಲ್ಲಿದ್ದ ಅಂಗಡಿಯಿಂದ ಐಸ್ಕ್ರೀಮ್ ಸವಿದು , ಇಂಡಿಯನ್ ಹೋಟೆಲ್ಲಿನಲ್ಲಿ ಊಟ ಮಾಡಿ ಮ್ಯೂನಿಕ್ ನಗರಕ್ಕೆ ಮರುಪ್ರಯಾಣ ಬೆಳೆಸಿ, ಮನೆಗೆ ಹಿಂದಿರುಗಿದೆವು.

             Lock bridge, Salzburg 

  Nuremberg: Once it wasthe    capital  of Germany.




          Bamberg, a city , Germany 


               Bamberg Bridge 


Bamberg Cathedral
Rose Garden, Bamberg

    Bamberg Cathedral

           Bamberg Rathau

  ಪ್ರತಿ ದಿನ ನಾವು ಸಂಜೆ ವಾಯು ವಿಹಾರಕ್ಕೆ ಹೋದಾಗಿನ ಮಧುರ ಕ್ಷಣಗಳು.




Herzo city center










Visit to Satvik's school



ಇವೆಲ್ಲದರ ಸುಂದರ ಅನುಭವದೊಂದಿಗೆ ಕೈ ಬೀಸಿ ಕರೆಯುತ್ತಿರುವ ತಾಯ್ನಾಡಿಗೆಪಯಣದ ತಯಾರಿಯೊಂದಿಗೆ,
ಅರುಂಧತಿ ಸುರೇಶ್ ಕುಲಕರ್ಣಿ.
26-08-2023

Comments