Kailash Manasa Sarovar Yatra | ಕೈಲಾಸ್ ಮಾನಸ ಸರೋವರ ಮತ್ತು ಮುಕ್ತಿನಾಥ ಯಾತ್ರಾ
ಕೈಲಾಸ್ ಮಾನಸ ಸರೋವರ ಮತ್ತು ಮುಕ್ತಿನಾಥ ಯಾತ್ರಾ : ದಿನಾಂಕ 1 2/06/2018: ಬೆಂಗಳೂರಿನ ಶಂಕರ್ ಟ್ರೆಕ್ಸ್ ಮುಖಾಂತರ ಕೈಲಾಸ್ ಮಾನಸ ಸರೋವರ್ ಯಾತ್ರೆಗೆ ಹೋಗಬೇಕಂದು ಕೊಂಡಾಗಲೇ ಒಂದು ಅನಿರ್ವಚನೀಯ ಸಂತೋಷ ಹಾಗು ರೋಮಾಂಚನ. ಪ್ರತಿಯೊಬ್ಬರಿಗೂ ಈ ಯಾತ್ರೆ ತಮ್ಮ ಜೀವನದ ಸುಂದರ ಕನಸು ಹಾಗು ಹೆಬ್ಬಯಕೆ. ಭಕ್ತಿಭಾವದಿಂದ ಪುಳಕಿತರಾಗುತ್ತೇವೆ. ತಂದೆ- ತಾಯಿಯರನ್ನು, ಗುರು ಹಿರಿಯರನ್ನು ಮನದಲ್ಲಿ ನೆನೆದು , ನಮಸ್ಕರಿಸಿ , ಮನೆ ದೇವರನ್ನು ಸ್ಮರಿಸಿ ಈ ಯಾತ್ರೆಯನ್ನು ಪೂರೈಸುವ ಶಕ್ತಿಯನ್ನು ಕರುಣಿಸೆಂದು ಬೇಡುತ್ತ ನಮ್ಮ ಪಯಣವನ್ನು ದಿನಾಂಕ 12/06/2018ರಂದು ಪ್ರಾರಂಬಿಸಿದೆವು ಈ ಯಾತ್ರೆಗೂ ಮೊದಲು ಶಂಕರ್ ಟ್ರೆಕ್ಸ್ ನವರು ಯಾತ್ರೆಯ ಕಠಿಣತೆಯ ಬಗ್ಗೆ ಸಂಭಾವ್ಯ ಆಗುಹೋಗುಗಳ ಬಗ್ಗೆ ಎಲ್ಲ ವಿವರಗಳನ್ನು ಒಂದು ಸಭೆ ಏರ್ಪಡಿಸಿ ವಿವರಿಸಿ ನಮ್ಮನ್ನು ಈ ಯಾತ್ರೆಗೆ ಸಜ್ಜು ಮಾಡಿದ್ದರು. ಯಾತ್ರೆಯ ಬಗ್ಗೆ ತಿಳಿದಾಗ ಭಯ ಮಿಶ್ರಿತ ರೋಮಾಂಚನ. ಏಕೆಂದರೆ ದುರ್ಗಮ ದಾರಿ, ಹವಾಮಾನದ ವೈಪರೀತ್ಯತೆ, ಸುಮಾರು 16000 ಅಡಿಗಳಿಗೂ ಎತ್ತರದ ಪ್ರದೇಶಗಳಲ್ಲಿ ...