ನೈಮಿಷಾರಣ್ಯ ಪ್ರವಾಸ | NAIMISHARANYA PRAVASA
ನೈಮಿಷಾರಣ್ಯ ಪ್ರವಾಸ
ದಿನಾಂಕ 15/05/2016 ರಂದು ನಾನು ನನ್ನ ಗೆಳತಿಯರ ಜೊತೆ ನೈಮಿಷಾರಣ್ಯ ಕ್ಷೇತ್ರಕ್ಕೆ ಬೆಂಗಳೂರಿನಿಂದ ವಿಮಾನದ ಮೂಲಕ ಪ್ರಾಯಾಣಿಸಿ ಲಕ್ನೋಗೆ ಹೋಗಿ ಅಲ್ಲಿಂದ ನೈಮಷಾರಣ್ಯಕ್ಕೆ ಕಾರಿನಲ್ಲಿ ಸುಮಾರು 3 ಗಂಟೆಗಳ ಕಾಲ ಪಯಣಿಸಿ, ಅಲ್ಲಿ ನಮಗಾಗಿ ಕಾಯ್ದಿರಿಸಿದ್ದ ಕೊಠಡಿಯಲ್ಲಿ ತಂಗಿದೆವು
ನೈಮಿಷಾರಣ್ಯ
ಈ ಪ್ರದೇಶವು ಉತ್ತರ ಪ್ರದೇಶದ ರಾಜದಾನಿಯಾದ ಲಕ್ನೋದಿಂದ 90 ಕಿ.ಮೀ.ದೂರದಲ್ಲಿದ್ದು ಸೀತಾಪುರ ಜಿಲ್ಲೆಯಲ್ಲಿದೆ. ಗಂಗಾನದಿಯ ಉಪನದಿಯಾದ ಗೋಮತಿ ನದಿಯ ದಂಡಿಯ ಮೇಲಿದೆ. ಇದಕ್ಕೆ ಈ ಹೆಸರು ಬರಲು ಅನೇಕ ಕಾರಣಗಳನ್ನು ಪುರಾಣಗಳು ಹೇಳಿದ್ದು ವಿಷ್ಣುವಿನ ನಾಮದಲ್ಲೊಂದಾದ ಅನಿಮಿಷ ಎಂಬ ಪದದಿಂದ ಬಂದಿದ್ದು ವಿಷ್ಣುದೇವರ ಜಾಗೃತ ಸ್ಥಿತಿಯನ್ನು ಪ್ರತಿನಿಧಿಸುತ್ತದೆ ಎನ್ನುವುದು ಒಂದು ಕಾರಣ. ಮಹಾವಿಷ್ಣುವು ನಿಮಿಷಾರ್ಧದಲ್ಲಿ ದೈತ್ಯನೊಬ್ಬನನ್ನು ಇಲ್ಲಿ ಸಂಹರಿಸಿದ್ದರಿಂದ ಈ ಪ್ರದೇಶಕ್ಕೆ ಈ ಹೆಸರು ಬಂದಿತೆಂದು ಇನ್ನೊಂದು ಪ್ರತೀತಿ. ಹಿಂದೊಮ್ಮೆ ಬ್ರಹ್ಮ ದೇವರನ್ನು 83000 ಋಷಿಗಳು ಹಾಗೂ ಸಂತರುಗಳೆಲ್ಲ ಸೇರಿಕೊಂಡು ಏಕಾಂತದಲ್ಲಿ ತಪಸ್ಸನ್ನಾಚರಿಸಲು ಹಾಗೂ ಮುಕ್ತಿಹೊಂದಲು ಒಂದು ಪುಣ್ಯಭೂಮಿಯನ್ನು ತೋರಿಸಬೇಕೆಂದು ಬೇಡಿಕೊಂಡಾಗ, ಬ್ರಹ್ಮದೇವರು ಮನೋಮಯ ಚಕ್ರವನ್ನು ಎಸೆದು ಅದು ಎಲ್ಲಿ ಭೂಮಿಯಲ್ಲಿ ಬೀಳುತ್ತದೆಯೋ ಅದು ತಪಸ್ಸಾನಚರಿಸಲು ಯೋಗ್ಯವಾದ ಪುಣ್ಯಭೂಮಿಯೆಂದು ಆ ಚಕ್ರವನ್ನು ಎಸೆದಾಗ ಆ ಚಕ್ರವು ಈ ಪುಣ್ಯಭೂಮಿಯಲ್ಲಿ ಬೀಳಲು ಇದಕ್ಕೆ ನೈಮಿಷಾರಣ್ಯ ಎಂಬ ಹೆಸರು ಬಂದಿರುವುದಾಗಿ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ
ಶ್ರೀರಾಮನು ರಾವಣನನ್ನುಸಂಹರಿಸಿದ ಮೇಲೆ ಈ ಪ್ರದೇಶದಲ್ಲಿಯೇ ಅಶ್ವಮೇಧಯಾಗವನ್ನು ಮಾಡಿರುವುದಾಗಿ ಉಲ್ಲೇಖವಿದೆ. ಇದಕ್ಕೆ ಪೂರಕವಾಗಿ ಇಲ್ಲಿ ಶ್ರೀರಾಮನ ದೇವಸ್ಥಾನವನ್ನು ನೋಡಬಹುದು . ಇದೇ ಪ್ರದೇಶದಲ್ಲಿಯೇ ರಾಮನ ಮಕ್ಕಳಾದ ಲವಕುಶರು ದೊಡ್ಡವರಾಗಿ ತಮ್ಮ ತಂದೆಯನ್ನು ಸೇರಿದ ಮೇಲೆ ಸೀತಾದೇವಿಯು ಭೂಗರ್ಭದೊಳಗೆ ಅಂತರ್ದಾನಳಾದಳೆಂಬ ಪೌರಾಣಿಕ ಉಲ್ಲೇಖವಿದೆ.
ಅಹಿರಾವಣರ ವಶದಿಂದ ಶ್ರೀರಾಮ ಲಕ್ಮಣರನ್ನು ಬಿಡಿಸಿಕೊಂಡು ಹನುಮಂತನು ತನ್ನ ಭುಜದ ಮೇಲೆ ಕರೆತಂದನೆಂಬ ಪ್ರತೀತಿಯಂತೆ ಇಲ್ಲಿ ಭೌವ್ಯ ಹಾಗೂ ಬೃಹದ್ರೂಪದ 18 ಅಡಿ ಎತ್ತರದ ಆಂಜನೇಯ ಮೂರ್ತಿ ಇರುವ ದೇವಸ್ಥಾನವನ್ನು ಈಗಲೂ ಕಾಣಬಹುದು.
ಮಹರ್ಷಿ ವೇದವ್ಯಾಸ ದೇವರು ನಾಲ್ಕು ವೇದಗಳನ್ನು ಆರು ಶಾಸ್ತ್ರಗಳನ್ನು ಮತ್ತು ಹದಿನೆಂಟು ಪುರಾಣಗಳನ್ನು ರಚಿಸಿ ಶಿಷ್ಯರಾದ ಜೈಮುನಿ ಋಷಿಗೆ ಸಾಮವೇದವನ್ನು ಇಲ್ಲಿಯೇ ಭೋದಿಸಿರುವುದಾಗಿಯೂ ಪ್ರತೀತಿ ಇದೆ. ಇವೆಲ್ಲವುಗಳಿಗೆ ಪೂರಕವಾಗಿ ನಾವು ಈ ಋಷಿಮುನಿಗಳ ದೇವಸ್ಥಾಗಳನ್ನು ನೋಡಬಹುದು. ಸೂತ ಪುರಾಣಿಕರು ಶೌನಕಾದಿ ಋಷಿಗಳಿಗೆ ಸತ್ಯನಾರಾಯಣಸ್ವಾಮಿ ವ್ರತದ ಮಹಿಮೆಯನ್ನು ಹೇಳಿ ಈ ವ್ರತವನ್ನು ಇಲ್ಲಿಯೇ ಮೊದಲು ಪ್ರಾರಂಭಿಸಿರುವುದಾಗಿ ಹೇಳಿದಂತೆ ಇಲ್ಲಿ ಶ್ರೀ ಸತ್ಯನಾರಾಯನ ದೇವಸ್ಥಾನ ವನ್ನೂ ನೋಡ ಬಹುದು. ಪಾಂಡವರು ತಮ್ಮ ಅಜ್ಞಾತವಾಸದ ಸಮಯದಲ್ಲಿ ಹಾಗೂ ಬಲರಾಮನು ತನ್ನ ತೀರ್ಥಯಾತ್ರೆಯ ಸಮಯದಲ್ಲಿ ಈ ಪುಣ್ಯ ಕ್ಷೇತ್ರವನ್ನು ಸಂದರ್ಶಿಸಿದ್ದರೆಂಬ ಉಲ್ಲೇಕವೂ ಇದೆ. ತುಳಸೀದಾಸರು ತಮ್ಮ ರಾಮಚರಿತ ಮಾನಸ ಕಾವ್ಯವನ್ನು ಇಲ್ಲಿಯೇ ಬರೆದರೆಂಬ ಉಲ್ಲೇಖವೂ ಇದೆ. ಬ್ರಹ್ಮದೇವರು ಎಸೆದ ಮನೋಮಯ ಚಕ್ರವು ಈ ಪ್ರದೇಶದಲ್ಲಿ ಬಿದ್ಧಾಗ ಅದರ ರಭಸಕ್ಕೆ ಭೂಮಿಯು ಸೀಳಿ ಒಳಗಿನಿಂದ ನೀರು ಉಕ್ಕಲು ಪ್ರಾರಂಬಿಸಿದಾಗ ಮುಂದಾಗುವ ಗಂಡಾಂತರವನ್ನು ಗಮನಿಸಿ ಬ್ರಹ್ಮದೇವರು ಆದಿಶಕ್ತಿ ಲಲಿತೆಯನ್ನು ಬೇಡಲು ಲಲಿತೆಯು ಆ ಚಕ್ರವನ್ನು ತಡೆದು ಅಲ್ಲಿಯೇ ನೆಲೆಸಿರುವಳೆಂಬ ಪ್ರತೀತಿಯಂತೆ ನಾವು ಅಲ್ಲಿ ಲಲಿತಾಂಬ ದೇವಸ್ಥಾನವನ್ನೂ ಕೂಡ ನೋಡಬಹುದು. ಇದು ನೈಮಿಷಾರಣ್ಯ ಕ್ಷೇತ್ರದ ಗ್ರಾಮದೇವತೆಯ ಸ್ಥಾನವಾಗಿದ್ದು ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಇಲ್ಲಿರುವ ಚಕ್ರತೀರ್ಥವು ಅತ್ಯಂತ ಪವಿತ್ರವಾಗಿದ್ದು ಈ ತೀರ್ಥದಲ್ಲಿ ಎಲ್ಲಾ ನದಿಗಳು ಮತ್ತು ಸಾಗರಗಳ ಸಾನಿಧ್ಯವಿದ್ದು ಇದರಲ್ಲಿ ಸ್ನಾನ ಮಾಡುವುದರಿಂದ ಜೀವಿಗಳು ತಮ್ಮ ಎಲ್ಲಾರೀತಿಯ ಪಾಪಗಳಿಂದ ಮುಕ್ತ ಹೊಂದುವರೆಂದು ಹೇಳಲಾಗಿದೆ.
| ವ್ಯಾಸಗದ್ದುಗೆ |
ಮಹರ್ಷಿ ವೇದವ್ಯಾಸ ದೇವರು ನಾಲ್ಕು ವೇದಗಳನ್ನು ಆರು ಶಾಸ್ತ್ರಗಳನ್ನು ಮತ್ತು ಹದಿನೆಂಟು ಪುರಾಣಗಳನ್ನು ರಚಿಸಿ ಶಿಷ್ಯರಾದ ಜೈಮುನಿ ಋಷಿಗೆ ಸಾಮವೇದವನ್ನು ಇಲ್ಲಿಯೇ ಭೋದಿಸಿರುವುದಾಗಿಯೂ ಪ್ರತೀತಿ ಇದೆ. ಇವೆಲ್ಲವುಗಳಿಗೆ ಪೂರಕವಾಗಿ ನಾವು ಈ ಋಷಿಮುನಿಗಳ ದೇವಸ್ಥಾಗಳನ್ನು ನೋಡಬಹುದು. ಸೂತ ಪುರಾಣಿಕರು ಶೌನಕಾದಿ ಋಷಿಗಳಿಗೆ ಸತ್ಯನಾರಾಯಣಸ್ವಾಮಿ ವ್ರತದ ಮಹಿಮೆಯನ್ನು ಹೇಳಿ ಈ ವ್ರತವನ್ನು ಇಲ್ಲಿಯೇ ಮೊದಲು ಪ್ರಾರಂಭಿಸಿರುವುದಾಗಿ ಹೇಳಿದಂತೆ ಇಲ್ಲಿ ಶ್ರೀ ಸತ್ಯನಾರಾಯನ ದೇವಸ್ಥಾನ ವನ್ನೂ ನೋಡ ಬಹುದು. ಪಾಂಡವರು ತಮ್ಮ ಅಜ್ಞಾತವಾಸದ ಸಮಯದಲ್ಲಿ ಹಾಗೂ ಬಲರಾಮನು ತನ್ನ ತೀರ್ಥಯಾತ್ರೆಯ ಸಮಯದಲ್ಲಿ ಈ ಪುಣ್ಯ ಕ್ಷೇತ್ರವನ್ನು ಸಂದರ್ಶಿಸಿದ್ದರೆಂಬ ಉಲ್ಲೇಕವೂ ಇದೆ. ತುಳಸೀದಾಸರು ತಮ್ಮ ರಾಮಚರಿತ ಮಾನಸ ಕಾವ್ಯವನ್ನು ಇಲ್ಲಿಯೇ ಬರೆದರೆಂಬ ಉಲ್ಲೇಖವೂ ಇದೆ. ಬ್ರಹ್ಮದೇವರು ಎಸೆದ ಮನೋಮಯ ಚಕ್ರವು ಈ ಪ್ರದೇಶದಲ್ಲಿ ಬಿದ್ಧಾಗ ಅದರ ರಭಸಕ್ಕೆ ಭೂಮಿಯು ಸೀಳಿ ಒಳಗಿನಿಂದ ನೀರು ಉಕ್ಕಲು ಪ್ರಾರಂಬಿಸಿದಾಗ ಮುಂದಾಗುವ ಗಂಡಾಂತರವನ್ನು ಗಮನಿಸಿ ಬ್ರಹ್ಮದೇವರು ಆದಿಶಕ್ತಿ ಲಲಿತೆಯನ್ನು ಬೇಡಲು ಲಲಿತೆಯು ಆ ಚಕ್ರವನ್ನು ತಡೆದು ಅಲ್ಲಿಯೇ ನೆಲೆಸಿರುವಳೆಂಬ ಪ್ರತೀತಿಯಂತೆ ನಾವು ಅಲ್ಲಿ ಲಲಿತಾಂಬ ದೇವಸ್ಥಾನವನ್ನೂ ಕೂಡ ನೋಡಬಹುದು. ಇದು ನೈಮಿಷಾರಣ್ಯ ಕ್ಷೇತ್ರದ ಗ್ರಾಮದೇವತೆಯ ಸ್ಥಾನವಾಗಿದ್ದು ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಇಲ್ಲಿರುವ ಚಕ್ರತೀರ್ಥವು ಅತ್ಯಂತ ಪವಿತ್ರವಾಗಿದ್ದು ಈ ತೀರ್ಥದಲ್ಲಿ ಎಲ್ಲಾ ನದಿಗಳು ಮತ್ತು ಸಾಗರಗಳ ಸಾನಿಧ್ಯವಿದ್ದು ಇದರಲ್ಲಿ ಸ್ನಾನ ಮಾಡುವುದರಿಂದ ಜೀವಿಗಳು ತಮ್ಮ ಎಲ್ಲಾರೀತಿಯ ಪಾಪಗಳಿಂದ ಮುಕ್ತ ಹೊಂದುವರೆಂದು ಹೇಳಲಾಗಿದೆ.
ಈ ಪ್ರದೇಶದಲ್ಲಿ ದಧೀಚಿ ಮಹಾಮುನಿಯು ತಮ್ಮ ಶರೀರದ ಎಲುಬುಗಳನ್ನು ಆಯುಧಗಳನ್ನಾಗಿ ಮಾಡಲು ದೇವತೆಗಳಿಗೆ ನೀಡಿದ್ದು ಆ ಆಯುಧಗಳಿಂದಲೇ ದೇವತೆಗಳು ರಾಕ್ಷರುಗಳನ್ನು ಸಂಹಾರ ಮಾಡಿ ಲೋಕೋಪಕಾರವನ್ನು ಮಾಡಿರುವುದಾಗಿ ಹೇಳಿದ್ದು, ಇಲ್ಲಿ ದಧೀಚಿ ಮಹರ್ಷಿಗಳ ದೇವಸ್ಥಾನ ಹಾಗೂ ದಧೀಚಿ ಕೊಂಡವಿದ್ದು ಇಲ್ಲಿ ಸ್ಥಾನ ಮಾಡುವುದರಿಂದ ಪಾಪದಿಂದ ಮುಕ್ತಿ ಹೊಂದಬಹುದೆಂದು ಪ್ರತೀತಿ ಇದೆ.
| ಹನುಮಾನ್ ಗದ್ದುಗೆ, ಪ್ರವಚನ ಪೀಠ |
ಆಯೋಜಕರಾದ ಶ್ರೀ ಗೋಪಾಲಕೃಷ್ಣರು ಹಾಗೂ ಶ್ರೀ ಸತ್ಯನಾರಾಯಣರವರು ಬೆಳಿಗ್ಗೆ ಹಾಗೂ ಸಾಯಂಕಾಲ ಟೀ/ಕಾಫಿ,ಮಜ್ಜಿಗೆ,ಪಾನಕದ ವ್ಯವಸ್ಥೆಯನ್ನು ಮಾಡುತ್ತಿದ್ದರು. ಅತ್ಯಂತ ಶ್ರದ್ದಾಪೂರ್ವಕವಾಗಿ ಎಲ್ಲಾ ಕಾರ್ಯಕ್ರಮಗಳೂ ನಡೆಯುತ್ತಿದ್ದವು. ಎಲ್ಲರೂ ಒಂದೇ ಮನೆಯಂತಿದ್ದೆವು.
ಪ್ರವಚನ ನಡೆದ ಸ್ಥಳ ಹನುಮಾನ್ ಗದ್ದಿ
ಇಲ್ಲಿ ನೋಡಬೇಕಾದ ಸ್ಥಳಗಳನ್ನು ಸಂದರ್ಶಿಸಲು ಆಯೋಜಕರು ವ್ಯವಸ್ಥೆ ಮಾಡಿದ್ದರಿಂದ , ಒಂದೊಂದು ದಿನ ಒಂದೊಂದು ಸ್ಥಳಕ್ಕೆ ಭೇಟಿ ನೀಡಿ, ಗೋಮತಿ ನದಿ, ಚಕ್ರತೀರ್ಥ,ದಧೀಚಿ ಕೊಂಡ, ರುದ್ರಾವೃತ, ವ್ಯಾಸ ಗದ್ದುಗೆ, ಜೆಮಿನಿ ಮತ್ತು ಸೂತಪುರಾಣಿಕ ಗದ್ದುಗೆ, ಸತ್ಯನಾರಾಯಣ ಸ್ವಾಮಿ, ಬಾಲಾಜಿ, ಗ್ರಾಮದೇವತೆ ಲಲಿತಾಂಬೆ, ರಾಮದೇವರು, ಹನುಮಾನ್ ದೇವಸ್ಥಾನ, ಸೀತಾದೇವಿಯು ಭೂಗರ್ಭದಲ್ಲಿ ಅಂತರ್ದಾನಳಾದ ಸ್ಥಳ ಮುಂತಾದ ಪ್ರಮುಖ ದೇವಸ್ಥಾನಗಳನ್ನು ವೀಕ್ಷಿಸಿದೆವು. ಮುಕ್ತಾಯದ ದಿನ ಮುಕ್ತಾಯ ಸಮಾರಂಭವನ್ನು ಏರ್ಪಡಿಸಿ, ಶ್ರೀ ಸತ್ಯನಾರಾಯಣಾಚಾರ್ಯರಿಗೆ ಸನ್ಮಾನವನ್ನು ಭಕ್ತಿಪೂರ್ವಕವಾಗಿ ನೆರವೇರಿಸಲಾಯಿತು. ಹೀಗೆ ನೈಮಿಷಾರಣ್ಯದಲ್ಲಿ ಭಾಗವತ ಸಪ್ತಾಹ ಅತ್ಯಂತ ಶಿಸ್ತು, ಭಕ್ತಿ ಹಾಗೂ ಶ್ರದ್ಧಾಪೂರ್ವಕವಾಗಿ ನೆರೆವೇರಿ, ಎಲ್ಲರೂ ಧನ್ಯತಾಬಾವದಿಂದ ಹಿಂತಿರುಗಿದೆವು.
ನಾವು ನಂತರ ಹಿಮಾಚಲ ಪ್ರದೇಶದ ಶಕ್ತಿಪೀಠಗಳನ್ನು ವೀಕ್ಷಿಸಲು ನಮ್ಮ ಗೆಳತಿ ಜಯಲಕ್ಷಿಯವರ ಹಿಮಾಚಲದಲ್ಲಿದ್ದ ಅವರ ಅಣ್ಣನಮನೆಗೆ ರಾತ್ರಿ ರೈಲಿನಲ್ಲಿ ಲಕ್ನೋಕ್ಕೆ ತೆರಳಿದೆವು. ಅಲ್ಲಿಂದ ರಸ್ತೆಮೂಲಕ ಸುಮಾರು 2 ಗಂಟೆ ಪಯಣಿಸಿ ಧರ್ಮಪುರದಲ್ಲಿರುವ ಅವರ ಮನೆಯನ್ನು ತಲುಪಿ, ಅಲ್ಲಿ ತಂಗಿದೆವು. ಅವರ ಮನೆಯಲ್ಲಿ ಅವರ ಅಣ್ಣ ಅತ್ತಿಗೆಯವರು ಅತ್ಯಂತ ಆತ್ಮೀಯತೆಯಿಂದ ನೋಡಿಕೊಂಡಿದ್ದನ್ನು ಎಂದೂ ಮರೆಯುವ ಹಾಗಿಲ್ಲ.
![]() |
| ಜಯಲಕ್ಷ್ಮಿ ಅಣ್ಣನ ಮನೆ , ಧರಮ್ ಪುರಿ |
ಮರುದಿನದಿಂದ ಶಕ್ತಿಪೀಠಗಳ ವೀಕ್ಷಣೆಗೆಂದು ಒಂದು ವಾಹನದ ವ್ಯವಸ್ಥೆಯನ್ನು ಮಾಡಿಕೊಂಡು ಹೊರಟೆವು. 2.5.2016ರಂದು ಬೆಳಿಗ್ಗೆ ಗಂಟೆ 10ಕ್ಕೆ ಧರಂಪುರದಿಂದ ಹೊರಟು ಕುಲು ಮನಾಲಿಯತ್ತ ಪಯಣ ಬೆಳೆಸಿದೆವು. ಮಾರ್ಗಮಧ್ಯದಲ್ಲಿ ಸುಂದರ ನಗರ, ತೂಗುಸೇತುವೆ ಹಾಗೂ ಡ್ಯಾಂನ್ನು ವೀಕ್ಷಿಸಿದೆವು. ಮಾರ್ಗಮಧ್ಯದಲ್ಲಿ ಕುಲಿವಿನ ಸೋಲಾಂಗ್ ವ್ಯಾಲಿಯನ್ನು ವೀಕ್ಷಿಸಿದೆವು. ಇದು ಅತ್ಯಂತ ಸುಂದರ ಪ್ರದೇಶವಾಗಿದ್ದು ಇಲ್ಲಿ ಪ್ಯಾರಾಗ್ಲೈಂಡಿಂಗ್ ರೋಚಕತೆಯನ್ನು ಸವಿದೆವು.

| ಮನಾಲಿಯ ಪ್ರಕೃತಿ ಸೌಂದರ್ಯ |
| ತೂಗು ಸೇತುವೆ |
ಅಲ್ಲಿ ಸ್ವಲ್ಪ ಹೊತ್ತು ಪ್ರಕೃತಿಯ ಮಡಿಲಲ್ಲಿದ್ದು ಮಾರ್ಗ ಮದ್ಯದ ರಮಣೀಯತೆಯನ್ನು ಸವಿಯುತ್ತಾ ಮನಾಲಿಯನ್ನು ತಲುಪಿ ಅಲ್ಲಿ ಹೊಟೆಲ್ ಒಂದರಲ್ಲಿ ತಂಗಿದೆವು. ಮನಾಲಿಯಿಂದ 51 ಕಿ.ಮಿ.ದೂರದಲ್ಲಿರುವ ರೋಥಾಂಗ್ ಪಾಸ್ ನೋಡುವುದೆ ಒಂದು ಅಧ್ಬುತ. ಸಮಯದ ಅಭಾ ವದಿಂದ ನಮಗೆ ಅಲ್ಲಿ ಹೆಚ್ಚಿನಸಮಯವನ್ನು ಕಳೆಯಲು ಸಾಧ್ಯವಾಗಲಿಲ್ಲ. ಆದರೆ ಅಲ್ಲಿಯ ಹಿಮಶಿಖರವನ್ನು ನೋಡುವುದೇ ಒಂದು ಅದ್ಬುತ. ಮರುದಿನ ಬೆಳಿಗ್ಗೆ ಮನಾಲಿಯಲ್ಲಿರುವ ಹಿಡ್ಹಿಂಬ ಹಾಗೂ ಘಟೋದ್ಗಜ ದೇವಸ್ಥಾನವನ್ನು ವೀಕ್ಷಿಸಲು ಹೋದೆವು.
![]() | ||||
| ಘಟೋದ್ಗಜ ದೇವಸ್ಥಾನ |
![]() |
| ಘಟೋದ್ಗಜ ದೇವಸ್ಟಾನ |
![]() |
| ಹಿಡ್ಹಿಂಬ ದೇವಾಸ್ಥಾನ |
![]() |
| ಹಿಡ್ಹಿಂಬ ದೇವಾಸ್ಥಾನ |

ಅಲ್ಲಿಂದ 6 ಕಿ.ಲೋ.ದೂರದಲ್ಲಿರುವ ವಸಿಷ್ಠ ಮತ್ತು ಶ್ರೀರಾಮ ದೇವಸ್ಥಾನಾನವನ್ನು ವೀಕ್ಷಿಸಿದೆವು ದೇವಸ್ಥಾನಗಳನ್ನು ಸುಂದರ ಮರದ ಕೆತ್ತನೆಯಿಂದ ಮಾಡಿದ್ದು ಮನಮೋಹಕವಾಗಿವೆ
![]() |
| ಶ್ರೀ ರಾಮ ದೇವಸ್ಥಾನ, ಮನಾಲಿ |
![]() |
| ವಸಿಷ್ಠ ದೇವಸ್ಥಾನ, ಮನಾಲಿ |
![]() |
| ಮಾಣಿಕರ್ಣ |



ಶಿವನ ದೇವಸ್ಥಾನ, ಮಣಿಕರ್ಣಿಕ
![]() |
| ಬಿಸಿನೀರಿನ ಬಗ್ಗೆ ಮಾಣಿಕರ್ಣ |
ಪಾರ್ವತಿದೇವಿ ಮಂದಿರ, ಮಣಿಕರ್ಣ
ಶ್ರೀ. ರಾಮಮಂದಿರ ಮಣಿಕರ್ಣ
ಜ್ವಾಲಾದೇವಿಯ ಕ್ಷೇತ್ರ
ಅಲ್ಲಿಂದ ಕಾಂಗ್ರ ಜಿಲ್ಲೆಯಲ್ಲಿರುವ ಜ್ವಾಲಾದೇವಿಯ ಕ್ಷೇತ್ರಕ್ಕೆ ಬಂದು ತಂಗಿದೆವು. ಮರುದಿನ ಜ್ವಾಲಾದೇವಿಯ ದೇವಸ್ಥಾನವನ್ನು ವೀಕ್ಷಿಸಿದೆವು. ಇದು ಎತ್ತರವಾದ ಪ್ರದೇಶದಲ್ಲಿದ್ದು ದೇವಸ್ಥಾನದಲ್ಲಿ ಯಾವುದೇ ಮೂರ್ತಿ ಇರುವುದಿಲ್ಲ ಇಲ್ಲಿ ಯಾವಾಗಲೂ ಜ್ವಾಲೆಯು ಉರಿಯುವುದನ್ನು ಕಾಣಬಹುದು. ಇಲಿ ತನ್ನಷ್ಟಕ್ಕೇ ತಾನೇ ಯಾವ ಉರುವಲು ಇಲ್ಲದೇ ಜ್ವಾಲೆ ಉರಿಯುತ್ತಿರುವುದು ರೋಚಕವಾಗಿದ್ದು 51 ಶಕ್ತಿಪೀಠಗಳಲ್ಲಿ ಇದೂ ಒಂದಾಗಿದೆ. ಜ್ವಾಲಾ ದೇವಿಯ ದರ್ಶನದಿಂದ ತಮ್ಮೆಲ್ಲಾ ಸಂಕಷ್ಟಗಳು ನಾಶವಾಗಿ ದೇವಿಯು ಕಾಪಾಡುತ್ತಾಳೆಂದು ಅತ್ಯಂತ ಭಕ್ತಿಬಾವದಿಂದ ಭಕ್ತರು ಪೂಜಿಸುತ್ತಾರೆ. ಅಲ್ಲಿರುವ ಇತರ ದೇವಸ್ಥಾನಗಳನ್ನು ನೋಡಿ, ಇನ್ನೊಂದು ಶಕ್ತಿಪೀಠವಾದ ನೈನಾದೇವಿಯ ದರ್ಶನಕ್ಕೆ ತೆರಳಿದೆವು.
ಈ ಕ್ಷೇತ್ರವು ಚಂಡೀಗಡದಿಂದ 100 ಕಿ.ಮೀ.ದೂರದಲ್ಲಿದ್ದು ಶಿವಾಲಿಕ ಪರ್ವತದ ಎತ್ತರದ ಪ್ರದೇಶದಲ್ಲಿದೆ. ಅಲ್ಲಿಗೆ ತೆರಳುವುದೇ ಅದ್ಭುತ ಅನುಭವ. ಗಾಳಿಯು ಅತ್ಯಂತ ರಭಸದಿಂದ ಬೀಸುತ್ತಿರುತ್ತದೆ. ಮಂದಿರದ ಮುಖ್ಯದ್ವಾರದಲ್ಲಿ ಗಣೇಶ ಹಾಗೂ ಶಿವನ ಮೂರ್ತಿಯನ್ನು ನೋಡಬಹುದು. ಗರ್ಭಗುಡಿಯಲ್ಲಿ ಮಾತಾ ಕಾಳಿ, ನೈನಾದೇವಿ ಮತ್ತು ಗಣೇಶ ಮೂರ್ತಿಗಳನ್ನು ನೋಡಬಹುದು. ಪುರಾಣಗಳಲ್ಲಿ ಹೇಳಿದ ಹಾಗೇ ದಕ್ಷನ ಯಜ್ಞದಲ್ಲಿ ತಮಗೆ ಅಪಮರ್ಯಾದೆಯನ್ನು ಮಾಡಿದಕ್ಕೆ ಸತಿ ದೇವಿಯು ಬೆಂಕಿಗೆ ತನ್ನನ್ನು ಅರ್ಪಿಸಿಕೊಂಡಾಗ ಶಿವನು ಅವಳನ್ನು ಎತ್ತಿ ರುದ್ರವತಾರನಾಗಿ ನಾಟ್ಯವನ್ನು ಗೈಯುತ್ತಾ ಅವಳನ್ನು ಎತ್ತಿಕೊಂಡು ಹೋಗುತ್ತಿರುವಾಗ ಸತೀದೇವಿಯ ಕಣ್ಣುಗಳು ಇಲ್ಲಿ ಬಿದ್ದಿದ್ದರಿಂದ ಈ ಕ್ಷೇತ್ರದಲ್ಲಿ ದೇವಿಯ ಕಣ್ಣುಗಳು ಸ್ಥಾಪಿತವಾಗಿವೆ ಎಂಬ ಪ್ರತೀತಿ ಇದೆ. ದೇವಿಯ ದರ್ಶನವನ್ನು ಮಾಡಿಕೊಂಡು, ಮುಂದಿನ ಶಕ್ತಪೀಠವಾದ ಚಿಂತಪೂರ್ಣಿದೇವಿಯ ದರ್ಶನವನ್ನು ಪಡೆಯಲು ಅಲ್ಲಿಗೆ ತೆರಳಿದೆವು.
ಚಿಂತಪೂರ್ಣಿ ಅಮ್ಮನವರ ದೇವಸ್ಥಾನ
ಈ ದೇವಸ್ಥಾನವು ಹಿಮಾಚಲದ ಧರ್ಮಶಾಲಾಸ್ಥಳಕ್ಕೆ ಹತ್ತಿರವಿದ್ದು, ಪಾಲಂಪುರದಿಂದ 10 ಕಿ.ಮೀ.ದೂರದಲ್ಲಿದೆ. ಈ ಭೌವ್ಯಮಂದಿರ ಮತ್ತು ಸುತ್ತಮುತ್ತಲಿನ ಪ್ರದೇಶ ನಯನ ಮನೋಹರವಾಗಿದೆ. ಮಂದಿರದ ಪಕ್ಕದಲ್ಲಿಯೇ ನದಿಯು ಭೋರ್ಗರೆಯುತ್ತಾ ಹರಿಯುತಿದ್ದು ರುದ್ರರಮಣೀಯವಾಗಿದೆ. ಚಾಮುಂಡಾದೇವಿಯ ವಿಗ್ರಹವನ್ನು ಯಾವಾಗಲೂ ಕೆಂಪು ಬಟ್ಟೆಯಿಂದ ಸುತ್ತಿರುತ್ತಾರೆ. ಇಲ್ಲಿ ದೇವಿಯು ಚಂಡ-ಮುಂಡ ರಾಕ್ಷಸರನ್ನು ಸಂಹರಿಸಿ ಭಕ್ತರನ್ನು ಕಾಪಾಡಿದ್ದು, ಚಾಮುಂಡಾ ಎಂಬ ಹೆಸರನ್ನು ಪಡೆದಿರುವುದಾಗಿ ಉಲ್ಲೇಖವಿದೆ. ಈ ದೇವಸ್ಥಾನದ ಪ್ರಾರಂಗಣವು ವಿಶಾಲವಾಗಿದ್ದು, ಇದರ ಶಿಖರದಲ್ಲಿ ಹನುಮಾನ್ ಮತ್ತು ಭೈರವ ಮೂರ್ತಿಗಳನ್ನು ನೋಡಬಹುದಾಗಿದೆ. ದೇವಸ್ಥಾನದ ಹಿಂದೆ ಸಣ್ಣ ಗವಿಯಲ್ಲಿ ಶಿವಲಿಂಗವನ್ನು ಸ್ಥಾಪಿಸಲಾಗಿದೆ. ಇದು ಶಿವ ಮತ್ತು ಶಕ್ತಿಯ ಸ್ಥಾನವಾಗಿರುವುದರಿಂದ ಇದಕ್ಕೆ ಚಾಮುಂಡಾ ನಂದಿಕೇಶ್ವರ ದೇವಸ್ಥಾನವೆಂದು ಕೂಡ ಕರೆಯಲಾಗುತ್ತದೆ. ಹತ್ತಿರದಲ್ಲೆ ರುದ್ರಭೂಮಿ ಇದ್ದು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮೃತರಾದವರ ಅಂತಿಮ ಸಂಸ್ಕಾರವನ್ನು ಇಲ್ಲಿ ನೆರವೇರಿಸುತ್ತಾರೆ.
ನಾವು ಈ ದೇವಸ್ಥಾನಕ್ಕೆ ಬೇಟಿ ಇತ್ತಾಗ ಅನೇಕಲ್ಲುಗಳ ಭಯಂಕರ ಮಳೆ ಬಿದ್ದು, ದೇವಸ್ಥಾನದ ಪ್ರಾರಾಂಗಣದಲ್ಲಿ ಮಳೆ ನೀರು ನುಗ್ಗಿ ಸಮಾರು ಮುಕ್ಕಾಲು ತಾಸು ಭಯ-ಭಕ್ತಿಯಿಂದ ದೇವಿಯನ್ನು ಕಾಪಾಡು ಎಂದು ಸ್ತುತಿಸುತ್ತಾ ನಿಂತಿದ್ದೆವು. ದೇವಿಯ ಕೃಪಾಕಟಾಕ್ಷದಿಂದ ಮಳೆ ಕಡಿಮೆಯಾಗಿ ನಮ್ಮ ಮುಂದಿನ ಪಯಣವನ್ನು ಕೈಗೊಂಡು, ದರಂಪುರವನ್ನು ದೇವಿ ಅನುಗ್ರಹದಿಂದ ಸುರಕ್ಷತವಾಗಿ ತಲುಪಿದೆವು.
ನಮ್ಮ ಮುಂದಿನ ಪಯಣ ಹಿಮಾಚಲದ ರಾಜಧಾನಿ ಸುಂದರ ಶಿಮ್ಲಾ ನಮಗೆಲ್ಲ ಗೊತ್ತಿರುವ ಹಾಗೆ ಇದೊಂದು ಅತೀ ಸುಂದರ ನಗರವಾಗಿದ್ದು ದಾರಿಯುದ್ದಕ್ಕೂ ಕಣ್ಮನ ಸೆಳೆಯುವ ಪ್ರಕೃತಿ ಸೌಂದರ್ಯ. ಮಾರ್ಗ ಮದ್ಯದಲ್ಲಿ ಗ್ರೀನ್ ವ್ಯಾಲಿಯ ರಮಣೀಯತೆಯನ್ನು ನೋಡಿಯೇ ಅನುಭವಿಸಬೇಕು ನಾವು ಕುದುರೆ ಏರಿ ಮೂರು ಕಿಲೋಮೀಟರ್ ದೂರವಿರುವ ವ್ಯೂ ಪಾಯಿಂಟಿಗೆ ಹೋದೆವು. ಅದೊಂದು ಅದ್ಭುತ ಅನುಭವ. ಅಲ್ಲಿಂದಲೇ ಶಿಮ್ಲಾ ಭವನವನ್ನು ಹಾಗು ಕೆಲವು ಪ್ರಮುಖ ಕಟ್ಟಡಗಳನ್ನ ವೀಕ್ಷಿಸಿದೆವು . ಶಿಮ್ಲಾ ಡ್ರೆಸ್ ಹಾಕಿಕೊಂಡು ಹಾಗು ಕುದುರೆ ಸವಾರಿಯ ಫೋಟೋ ತೆಗೆಸಿಕೊಂಡೆವು ಅದೊಂದು ಅವಿಸ್ಮರಣೀಯ ನೆನಪು
This is my first blog post. I shall continue to post more stories from my other travel experiences soon.
Thank you for reading,
Arundhati




















Comments
Post a Comment