MEMORABLE DAYS IN GERMANY
MEMORABLE DAYS IN BERLIN ಜರ್ಮನಿಯ ರಾಜಧಾನಿ ಬರ್ಲಿನ್ . ಅಲ್ಲಿ ತಮ್ಮ ಬದುಕಿನ ಸುಮಧುರ ಕ್ಷಣಗಳನ್ನು ಕಳೆಯುತ್ತಿರುವ ಮಗಸೊಸೆ ನನ್ನನ್ನು ಇಲ್ಲಿಗೆ ಆಹ್ವಾನಿಸಿ, ಇಲ್ಲಿಯ ಸುಂದರ ಪ್ರಕೃತಿಯನ್ನು ತೋರಿಸಬೇಕೆನ್ನುವ ಅವರ ಅಭಿಲಾಷೆಯಂತೆ, ದಿನಾಂಕ 02.06.2023ರಂದು ಇಲ್ಲಿಗೆ ಪಯಣಿಸಿದೆ. ದೇವರ ದಯೆಯಿಂದ ಪ್ರಯಾಣವು ಸುಖಕರವಾಗಿದ್ದು ಮಗಸೊಸೆಯ ಸ್ವಾಗತದೊಂದಿಗೆ ಅವರ ಮನೆಗೆ ತಲುಪಿದೆ. ಪ್ರಯಾಣದ ದಣಿವು ಅವರ ಉಪಚಾರದಲ್ಲಿ ಮರೆತೇಹೋಗಿತ್ತು. ವಿಶಾಲವಾದ ಮನೆ, ಸದ್ದುಗದ್ದಲ ವಿಲ್ಲದ ವಾತಾವರಣ, ರುಚಿ ಶುಚಿಯಾದ ಊಟ, ಹಸಿರ ಸಿರಿಯ ಮಡಿಲಲ್ಲಿ ಸಂಜೆಯ ಓಡಾಟ, ಅಲ್ಲಲ್ಲಿ ಕಾಣಸಿಗುವ ವಿದೇಶಿಯರು , ಹೀಗೆ ವಾರ ಕಳೆದದ್ದೇ ಗೊತ್ತಾಗಲಿಲ್ಲ. ಹೀಗೆ ಒಂದು ವಾರವನ್ನು ಕಳೆಯಲಾಗಿ ಇಲ್ಲೇ ನೂರೈವತ್ತು ಕಿ.ಮೀ. ದೂರದಲ್ಲಿರುವ ಮಗಳು, ಅಳಿಯ ಮೊಮ್ಮಗನ ಆಗಮನ. Welcome at Railway station ಆ ದಿನ ಉಭಯ ಕುಶಲೋಪರಿ ಮಾತುಕತೆಯಲ್ಲಿ ರಾತ್ರಿ ಕಳೆದದ್ದೇ ಗೊತ್ತಾಗಲಿಲ್ಲ. ಎಲ್ಲರೂ ಸೇರಿ ಮರುದಿನ ಬರ್ಲಿನ್ ಸಿಟಿಯನ್ನು ನೋಡಲು ಹೋದೆವು....